ಬದುಕಿರುವವರೆಗೂ ಸಾವಿನಾ ಚಿಂತೆ
ಹೋಗುವ ಕಾಲಕೆ ಬದುಕಿನ ಚಿಂತೆ
ಹೊತ್ತಿರುವೆವು ನಾವು ಪಾಪ ಪುಣ್ಯಗಳ ಕಂತೆ
ಅದಕೆಲ್ಲ ಉತ್ತರ ಇಲ್ಲೇ ಪಡೆಯಬೇಕಂತೆ ||
ಸಾವಿನಾಚೆಯ ಊರು ಕಂಡವರು ಯಾರು
ಸ್ವರ್ಗ ನರಕಗಳ ಊಹೆಗಳು ನೂರಾರು
ಸ್ವರ್ಗದಾನಂದದಲಿ ಮಿಂದು ಬಂದವರಿಲ್ಲ ಎದುರಿನಲಿ
ನರಕದ ಬೇಗೆಯಲಿ ಬೆಂದು ಬಂದವರಿಲ್ಲ ಆಸು ಪಾಸಿನಲಿ||
ಸಾವಿನಾ ಸುತ್ತ ಅಂತೆ ಕಂತೆಗಳ ಭೂತ
ಇಲ್ಲಿಹುದು ನನಗೆ ತಿಳಿದಿರುವ ಅರ್ಥ
ಸಾವು ಬಂದಾಗ ನಮ್ಮ ದೇಹ ಕಾಣುವುದು ಅಂತ್ಯ
ಆತ್ಮ ಹುಡುಕುತಾ ಹೊರಡುವುದು ಹೊಸ ದೇಹದಾ ಸಾಂಗತ್ಯ ||
ಆರ್. ಆರ್. ಅಶಾಪುರ್
ಹೋಗುವ ಕಾಲಕೆ ಬದುಕಿನ ಚಿಂತೆ
ಹೊತ್ತಿರುವೆವು ನಾವು ಪಾಪ ಪುಣ್ಯಗಳ ಕಂತೆ
ಅದಕೆಲ್ಲ ಉತ್ತರ ಇಲ್ಲೇ ಪಡೆಯಬೇಕಂತೆ ||
ಸಾವಿನಾಚೆಯ ಊರು ಕಂಡವರು ಯಾರು
ಸ್ವರ್ಗ ನರಕಗಳ ಊಹೆಗಳು ನೂರಾರು
ಸ್ವರ್ಗದಾನಂದದಲಿ ಮಿಂದು ಬಂದವರಿಲ್ಲ ಎದುರಿನಲಿ
ನರಕದ ಬೇಗೆಯಲಿ ಬೆಂದು ಬಂದವರಿಲ್ಲ ಆಸು ಪಾಸಿನಲಿ||
ಸಾವಿನಾ ಸುತ್ತ ಅಂತೆ ಕಂತೆಗಳ ಭೂತ
ಇಲ್ಲಿಹುದು ನನಗೆ ತಿಳಿದಿರುವ ಅರ್ಥ
ಸಾವು ಬಂದಾಗ ನಮ್ಮ ದೇಹ ಕಾಣುವುದು ಅಂತ್ಯ
ಆತ್ಮ ಹುಡುಕುತಾ ಹೊರಡುವುದು ಹೊಸ ದೇಹದಾ ಸಾಂಗತ್ಯ ||
ಆರ್. ಆರ್. ಅಶಾಪುರ್