Tuesday, 30 August 2011

ಗೆಳೆಯನ ನೆನಪು

ಸದ್ದು ನಿದ್ದೆಹೋಗಿ ಮೌನ ಎದ್ದು ನಿಂತಿತ್ತು
ಅಂಧಕಾರವು ಬೆಳಕನ್ನು ಮೆಟ್ಟಿ ನಿಂತಿತ್ತು
ಮನಸಿಗೆ ಮಂಕು ಕವಿದು ಸುಮ್ಮನೆ ಮಲಗಿತ್ತು
ಅಂದು ನನ್ನ ಗೆಳೆಯನ ಉಸಿರು ನಿಂತಿತ್ತು .

ಗೆಳೆಯನ ನೆನಪುಗಳು  ಮನ ಕಲಕುತಿತ್ತು
ಆಡಿ ನಲಿದ ದಿನಗಳು ಕಣ್ಣೆದುರು ನಿಂತಿತ್ತು
ಮನಸ್ಸು ಮಗುವಿನಂತೆ ಬಿಕ್ಕಿ ಬಿಕ್ಕಿ ಅಳುತ್ತಿತ್ತು
ಅಂದು ನನ್ನ ಗೆಳೆಯನ ಉಸಿರು ನಿಂತಿತ್ತು .

ಬರಸಿಡಿಲು ಎದೆಗೆ ಅಪ್ಪಳಿಸಿದಂತಿತ್ತು
ಬಿರುಗಾಳಿಗೆ ಸಿಲುಕಿ ತತ್ತರಿಸಿದಂತಿತ್ತು
ಗೆಳೆಯನಿಲ್ಲದ ಜೀವನ ಇನ್ನೇಕೆ ಎಂದೆನ್ನಿಸಿತ್ತು
ಅಂದು ನನ್ನ ಗೆಳೆಯನ ಉಸಿರು ನಿಂತಿತ್ತು
                                             ಆರ್. ಆರ್. ಅಶಾಪುರ್

3 comments:

  1. really heart touching yar:) recently i lost my friend so missing him very much:(

    ReplyDelete
  2. "ಜೀವನ"ದಲ್ಲಿ ಬೇಕೇ ಬೇಕು "ಗೆಳೆತನ" ಇಲ್ಲದಿದ್ದರೆ ಜೀವನ ಕಾನನವೇ ಸರಿ. ಅಂತಹ ಗೆಳೆಯನ ಮರಣದಿಂದ ನೊಂದಿರುವ ನಿಮ್ಮ ಮನದ ಕವನವನ್ನೋದಿ ನನ್ನ ಮನ ಕಲಕಿತತು.
    ನಾನು ಕೂಡ ಗೆಳೆಯನಂತಿದ್ದ ನನ್ನ ಕರುಳಿನ ಕುಡಿಯ ಮರಣದ ನೋವಿನಲ್ಲೇ ದಿನಕಳೆಯುತ್ತಿರುವವಳು. ಕಳೆದುಕೊಂಡವರ ನೋವು ಅವರಿಗೇ ಗೊತ್ತು. ನಿಮಗೇ ಇಷ್ಟು ನೋವಿದ್ದರೆ ಅವರ ಹೆತ್ತವರಿಗೆ ಇನ್ನಷ್ಟು ನೋವಿರಬೇಡ? ಅಂತಹ ತಂದೆ ತಾಯಿಯರನ್ನು ನೀವು ಮಗನಂತೆ ಗಮನಿಸಿ ಮತ್ತು ಸಂತೈಸಿ, ಆಗ ನಿಮಗೂ ಸಮಾಧಾನ ಮತ್ತು ನಿಮ್ಮ ಗೆಳೆಯನ ಆತ್ಮಕ್ಕೆ ಶಾಂತಿ ಸಿಗುವುದು.

    ReplyDelete
  3. Ashapur ravare, saamaanyvaagi pratiyobba manushyanu obba Atmeeya snehitannannu ondiruttane. illavaadare avanu manushyanalla. haagu avanannu kaledukondaaga hElalaaradanta novaaguttade. neevu adannu kavitheyamoolaka vyaktapadisiddiri. sumaaru 15 dinagala hinde nanna Atmeeya mattu balya geleyannannu kaledukonde. avara bandugal nirlkshyadinda avana mrutha dehavannu nodalaagalilla. nimma kavitheinda avana nenpaaguttade. nimage vandanegalu.

    ReplyDelete