ದುಡ್ಡು ಐತೆ ಬಂಗ್ಲೆ ಐತೆ ಓಡಾಡೋಕೆ ಕಾರು
ಇಷ್ಟೆಲ್ಲಿದ್ರು ನಿನ್ ಮನ್ಸಿಗ್ ನೆಮ್ದಿ ಕೊಡೋರ್ ಯಾರು ?
ಭಂದ್ಗುಳ್ ಎದ್ರಿಗ್ ಬಂದ್ರೆ ಮಾತಾಡ್ತಾರ್ ಹಲ್ಲು ಕಿರ್ದು
ಮುಂದುಕ್ ಹೊದ್ಮೆಲ್ ಬೈಕೊತಾರ್ ಬಿನ್ನಿಗ್ ತಿವ್ದು ತಿವ್ದು
ಹಬ್ಬ ಔತ್ಣ ಏನೇ ಇರ್ಲಿ ಬರ್ತಾರ್ ರೆಡಿಯಾಗಿ
ಕಷ್ಟದಲ್ಲಿ ಸಹಾಯ ಕೇಳಿದ್ರೆ ಅಂತಾರ್ ದೂರ ಹೋಗಿ
ಸ್ನೇಹಿತ್ರೆಲ್ಲ ಜೊತೆಗೆ ಅನ್ನೋದ್ ಓದೋವರ್ಗು ಅಷ್ಟೇ
ಕೆಲ್ಸಾ ಸಿಕ್ಮೆಲ್ ದೂರಾಗ್ಬೇಕು ಈ ದುನಿಯಾದ ಕಥೆ ಇಷ್ಟೇ
ಭೂಮಿಮೇಲೆ ಒಳ್ಳೆ ದೊಸ್ತ್ರು ಸಿಗೋದ್ ಕಷ್ಟ ತಮ್ಮ
ಸಿಕ್ರುನೂವೆ ಜೊತೇಲ್ ಇರೊಂಗ್ ಬರಿಯಲ್ಲ ಆ ಬ್ರಮ್ಮ
ತಂದೆ ತಾಯಿ ಪ್ರೀತಿಯಲ್ಲ ಮದ್ವೆ ಆಗೋ ಗಂಟ
ಮದ್ವೆ ಆದ್ಮೇಲ್ ಅಂತಿರ್ತಾರೆ ಮಗ ಬದ್ಲಾಗ್ಬಿಟ್ಟ
ಹೆಂಡ್ತಿ ಪರ್ವಾಗ್ ಮಾತಾಡಿದ್ರೆ ಇವ್ರಿಗ್ ಹಿಡ್ಸಕಿಲ್ಲ
ಹಂಗಂತೇಳಿ ಅವ್ರ್ಕಡೆ ಹೋದ್ರೆ ಇವ್ಳು ಸುಮ್ನಿರಾಕಿಲ್ಲ
ಹಿಂಗಿರ್ವಾಗ ನೆಮ್ದಿಯಿಂದ ಹೆಂಗಿರ್ತೈತಿ ಬಾಳು
ನೆಮ್ದಿ ಇಲ್ದೆ ಕಾರು ಬಂಗ್ಲೆ ಇಟ್ಗಂಡ್ ಏನ್ ಮಾಡ್ತಿ ಹೇಳು
ಕಾಲಕ್ ತಕ್ಕಂಗ್ ನಡಿಲೇಬೇಕು ಅನ್ನೋ ಮಾತು ನಿಜ
ಸಂಭಾದನ್ನೋ ಕಾಲು ಮುರುದ್ರೆ ನಡಿಯೋದೆಂಗೆ ಮನುಜ ?
ಆರ್. ಆರ್. ಅಶಾಪುರ್
(ಆಡು ಭಾಷೆಯಲ್ಲಿ ಬರೆಯಲು ಪ್ರಯತ್ನಿಸಿದ್ದೇನೆ ತಪ್ಪಿದ್ದಲ್ಲಿ ದಯವಿಟ್ಟು ಕ್ಷಮಿಸಿ )

ಶಬಾಶ್ :) good try da:) all the best:)
ReplyDeletemaanya Aashapur ravre, Bhaashe bagge nondukollabedi. Chennagide. Adare, Hana ide, Caar ide, Hendati iddale, Aadroo nemmadi illa andre Hege. andre Samsaarada Caarannu Drive maaduvudakke baruvudilla endaayitu. Buddivantike inda ADALITA nadesabeku. Aaagale Samsaar. allave? Vandanegalodane.
ReplyDelete