Monday, 26 September 2011

ಬಿಡುವು ಕೊಡದೆ ಕಾಡಿದೆ.

ನಿನ್ನ ಬಳೆಯ ನಾದಕೆ
ಮನಸು ತಾಳ ಹಾಕಿದೆ
ನಿನ್ನ ಕಾಲ್ಗೆಜ್ಜೆಯ ಸದ್ದಿಗೆ
ಹೃದಯ ಹೆಜ್ಜೆ ಹಾಕಿದೆ

ತುಟಿ ಅಂಚಿನ ಮುಗುಳ್ನಗೆ
ಕಣ್ಣ  ತುಂಬಾ ತುಂಬಿದೆ
ನಿನ್ನ ಮಧುರ ದ್ವನಿ ಅದು
ಕಿವಿಯ ಒಳಗೆ ಗುನುಗಿದೆ

ಊಟ ನನ್ನ ಮೇಲೆ ಮುನಿದು
ನಿದುರೆ ದೂರ ತಳ್ಳಿದೆ
ಹಗಲು ಇರುಳು ನಿನ್ನ ನೆನಪು
ಬಿಡುವು ಕೊಡದೆ ಕಾಡಿದೆ.
                            ಆರ್.ಆರ್.ಆಶಾಪುರ್

4 comments:

  1. ಆಶಾಪುರ ಅವರೇ,
    ಧನ್ಯವಾದಗಳು ,ನೀವು ಕೂಡ ನನ್ನ ಹಾಗೆ ಬ್ಲಾಗ್ ಲೋಕಕ್ಕೆ ಹೊಸಬರು ,ಹೀಗೆ ಬರೀತಾ ಇರಿ :) ಹಾಗೇ ಆಗಾಗ ನನ್ನ ಬ್ಲಾಗ್ ಗೆ ಭೇಟಿ ಕೊಡ್ತಾ ಇರಿ :)

    ReplyDelete
  2. Dhanyavaadagalu. Khandita nodtini.

    ReplyDelete
  3. super bro....its so nyc....

    ReplyDelete