Wednesday, 22 January 2014

ಮಿಸ್ಡ್ ಕಾಲ್

 
ತಪ್ಪಿ ಅವನ ಮೊಬೈಲ್ ಗೆ
ಬಂದ ಕರೆ
ಬ್ರಮಃಚಾರಿ ಜೀವನಕ್ಕೆ
ಹಾಕಿತು ತೆರೆ.


                   ಆರ್.ಆರ್.ಆಶಾಪುರ್

Sunday, 19 January 2014

ಮರೆಯಲಾರದೆ

ಜೀವನ ಕಡಲಲ್ಲಿ
ಸ್ವಚಂದವಾಗಿ ಈಜುತಿದ್ದ
ಮೀನು ನಾನು,
ಪ್ರೀತಿ ಬಲೆಯಲ್ಲಿ ಬಂದಿಸಿದೆ ನೀನು,
ಜೀವ ಹೋಗುವ ಸೂಚನೆ ಇದ್ದರೂ
ಬಲೆಯ ಮೋಹಕ್ಕೆ ಸಿಲುಕಿ
ಗುರುತಿಸದಾದೆ.
ಬಲೆ ಇಂದ ಹೊರ ಹಾಕಿ ನಡೆದಿರುವೆ
 ಇಂದು ನೀನು,
ಬಲೆಯ ನೆನಪಿನಲ್ಲೆ
 ಕೊರಗುತಿರುವೆ ನಾನು
ಬಲೆಯನ್ನು ಮರೆಯಲಾರದೆ
ಮೊದಲಿನಂತೆ ಈಜಲಾರದೆ.
                 ಆರ್.ಆರ್.ಆಶಾಪುರ್

Wednesday, 15 January 2014

ಮರೆಯಲಾರದೆ

ನನ್ನ ನೆನಪಿನ ಕೆರೆಯಲಿ
ನಿನ್ನದೆ ಹೂಳು ತುಂಬಿಹುದು
ಹೊಸ ನೀರಿಗೆ ಜಾಗವಿಲ್ಲ
ಆದರೂ
ಹೂಳು ತೆಗೆಯಲು ಮನಸಿಲ್ಲ.
                 ಆರ್.ಆರ್.ಆಶಾಪುರ್

Sunday, 5 January 2014

ದ್ವಂದ್ವ

ಮನಸು ಬಯಸಿದ ಕೆಲಸನ್ನು
ಬುದ್ದಿ ತಪ್ಪು ಎನ್ನುವುದು,
ಬುದ್ದಿ ಸರಿಯಂದ ಕೆಲಸವನು ಮಾಡಲು
ಮನಸು ಹಿಂಜರಿಯುವುದು.
ಬುದ್ದಿ, ಮನಸಿನ ಜಗಳದ ಮಧ್ಯೆ,
ಸರಿ, ತಪ್ಪುಗಳ ದ್ವಂದ್ವದ ನಡುವೆ
ಆಶೋತ್ತರಗಳ ಮರಣ.
                                     
                                        ಆರ್.ಆರ್.ಆಶಾಪುರ್