Friday, 28 February 2014

ಹಟ

ಅಳುತ್ತಿದ್ದ ಕಣ್ಣುಗಳನ್ನು ರಮಿಸಲು
ನಿನ್ನ ಭಾವಚಿತ್ರವನ್ನು ಮುಂದಿಟ್ಟೆ.
ಆದರೆ, ಇದ್ದಕ್ಕಿದ್ದಂತೆ ಮನಸು
ನಿನ್ನನ್ನು ಕರೆತರುವಂತೆ
ಹಟ ಹಿಡಿದು ಕುಳಿತಿದೆ.
                ಆರ್.ಆರ್.ಆಶಾಪುರ್

Monday, 24 February 2014

"ಹಿತ" ಶತ್ರುಗಳು

ನಮ್ಮ ಬೆಳವಣಿಗೆಯ ಸಹಿಸದೆ
ಕಾಲೆಳೆಯುವ ಜನರು,
ಕಾಲೆಳೆಯುವ ಭರದಲ್ಲಿ,
ನಮಗಿಂತ ಕೆಳಮಟ್ಟಕ್ಕಿಳಿದಿರುದನ್ನು
ಮರೆತಿರುತ್ತಾರೆ.
                     ಆರ್.ಆರ್.ಆಶಾಪುರ್

Sunday, 9 February 2014

ಸತ್ಯ-ಸುಳ್ಳು

ಸುಳ್ಳು ದ್ರವರೂಪಿ
ಸ್ಥಳ, ಪರಿಸ್ಥಿತಿಗೆ ತಕ್ಕಂತೆ
ಹೊಂದಿ ಕೊಳ್ಳುವುದು.
ಸತ್ಯ ಘನರೂಪಿ
ಯಾವುದೇ ಸ್ತಳ ಪರಿಸ್ಥಿತಿ ಯಲ್ಲೂ
ಬದಲಾಗುವುದಿಲ್ಲ.
ಸುಳ್ಳಿಗೆ ಅನೇಕಮುಖ
ಸತ್ಯಕ್ಕೆ ಒಂದೆ ಮುಖ
                   ಆರ್.ಆರ್.ಆಶಾಪುರ್

Thursday, 6 February 2014

ಸಮಾಜ ಸೇವೆ

ಕೋಟಿ ಸುರಿದು
ಓಟು ಪಡೆದು
ಲೂಟಿ ಮಾಡುವ ಕೆಲಸಕ್ಕೆ
ಲೂಟಿಕೋರರು ಕೊಟ್ಟ ಹೆಸರು
ಸಮಾಜ ಸೇವೆ.
                            ಆರ್.ಆರ್.ಆಶಾಪುರ್

ಔಷಧಿ


ನೇರ ನುಡಿಯುವವರು
ಕಹಿ ಔಷಧಿಯಂತೆ
ನಾವು ಯಾರಿಗೂ ಹಿಡಿಸುವುದಿಲ್ಲ
ಆದರೂ
ಅವಶ್ಯಕತೆ ಇದ್ದಾಗ
ನಮ್ಮ ಸಹಾಯ ಪಡೆಯಲು
ಯಾರೂ ಮರೆಯುವುದಿಲ್ಲ.
                                        ಆರ್.ಆರ್.ಆಶಾಪುರ್