Wednesday 10 August 2011

ಸಾವಿನ ಸುತ್ತ

ಬದುಕಿರುವವರೆಗೂ ಸಾವಿನಾ ಚಿಂತೆ
ಹೋಗುವ ಕಾಲಕೆ ಬದುಕಿನ ಚಿಂತೆ
ಹೊತ್ತಿರುವೆವು ನಾವು ಪಾಪ ಪುಣ್ಯಗಳ ಕಂತೆ
ಅದಕೆಲ್ಲ ಉತ್ತರ ಇಲ್ಲೇ ಪಡೆಯಬೇಕಂತೆ ||

ಸಾವಿನಾಚೆಯ ಊರು ಕಂಡವರು ಯಾರು
ಸ್ವರ್ಗ ನರಕಗಳ ಊಹೆಗಳು ನೂರಾರು
ಸ್ವರ್ಗದಾನಂದದಲಿ ಮಿಂದು ಬಂದವರಿಲ್ಲ ಎದುರಿನಲಿ
ನರಕದ ಬೇಗೆಯಲಿ ಬೆಂದು ಬಂದವರಿಲ್ಲ ಆಸು  ಪಾಸಿನಲಿ||

ಸಾವಿನಾ ಸುತ್ತ ಅಂತೆ ಕಂತೆಗಳ ಭೂತ
ಇಲ್ಲಿಹುದು ನನಗೆ ತಿಳಿದಿರುವ ಅರ್ಥ
ಸಾವು ಬಂದಾಗ ನಮ್ಮ ದೇಹ ಕಾಣುವುದು ಅಂತ್ಯ
ಆತ್ಮ ಹುಡುಕುತಾ  ಹೊರಡುವುದು ಹೊಸ ದೇಹದಾ ಸಾಂಗತ್ಯ ||

                                              ಆರ್. ಆರ್. ಅಶಾಪುರ್

2 comments:

  1. ಆಶಪುರ್ ರವರೆ ನಿಮ್ಮ ಬ್ಲಾಗ್ ನೋಡಿದೆ.
    ನಿಮ್ಮ ಸಾವಿನ ಸುತ್ತಾ ಕವನ ತುಂಬಾ ಚನ್ನಾಗಿದೆ.
    ಹಾಗೆ ಮುಂದುವರೆಸಿ .... ರಾಯರು ಒಳ್ಳೇದು ಮಾಡಲಿ

    ReplyDelete
  2. ತುಂಬು ಹೃದಯದ ಧನ್ಯವಾದಗಳು ಸರ್
    ನಿಮ್ಮ ಸಲಹೆ, ಸಹಕಾರ ತುಂಬಾ ಅಗತ್ಯ

    ReplyDelete